ಗವಿಶ್ರೀ ಸಂಪದ Download GavishreeSampad

ಸಂಸ್ಥಾನ ಶ್ರೀ ಗವಿಮಠದ ಕುರಿತು

“ಕೊಪಾಣಾದ್ರಿ ಭಕ್ತಿ ಶ್ರದ್ಧೆಗಳ ಸಹ್ಯಾದ್ರಿ, ಭಕ್ತಿ ಭಾವ ಪರವಶವಾಗುವ ಶಿವಸಾಯುಜ್ಯದ ಷಣ್ಮುದ್ರಿ. ಭಕ್ತಿ ಮುಕ್ತಿಯನ್ನು ಮೀರಿ ನಿಲ್ಲುವ ದೇವನಿಲಯ ಶ್ರೀಗವಿಮಠ. ಅನ್ನ, ಅರಿವು, ಆಧ್ಯಾತ್ಮ, ಅಂತ:ಕರಣಗಳ ಮೂಲಕ ನಾಡ ಸೇವೆಗೈಯುತ್ತ ನಾಡವರ ನಾಡಿ ಮಿಡಿತಗಳಿಗೆ ಸದಾ ಸ್ಪಂದಿಸಿರುವ ಶ್ರೀಮಠವಿದು. ಅರಿವು, ಆಚಾರ, ಶೀಲ ಶಿಕ್ಷಣ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ನೀಡುತ್ತ ಬಂದಿರುವದು ಶ್ರೀಗವಿಮಠದ ವೈಶಿಷ್ಟ್ಯತೆ. ಭಕ್ತ ದೇವನಿಗಾಗಿ ಬರುವದಲ್ಲ, ದೇವನೇ ಭಕ್ತನ ಬರುವಿಕೆಗಾಗಿ ಕಾಯುವ ಭಕ್ತಿಮಂದಿರ ಶ್ರೀಗವಿಮಠ. ಕಲ್ಲಿನಡಿಯ ಕೈಲಾಸವಾಗಿರುವ ಶ್ರೀಗವಿಮಠದ ಆಧಾರ ಸ್ತಂಭಗಳು ಎರಡು, ಒಂದು ಶ್ರೀಮಠದ ಹಿಂದಿನ ಎಲ್ಲ ಪೂಜ್ಯ ಶಿವಯೋಗಿಗಳವರ, ತಪ:ಶಕ್ತಿ ಇನ್ನೊಂದು ಭಕ್ತರ ಭಕ್ತಿ.


ಸಂಸ್ಥಾನ ಶ್ರೀ ಗವಿಮಠವು ಈ ನಾಡಿನ ಅನೇಕ ವಿರಕ್ತ ಮಠಗಳಲ್ಲಿ ಒಂದಾಗಿದೆ. ಅಕ್ಷರ ದಾಸೋಹ- ಅನ್ನ ದಾಸೋಹ- ಆಧ್ಯಾತ್ಮ ದಾಸೋಹಗಳನ್ನು ನಿತ್ಯ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿರುವ ತ್ರಿವಿಧ ದಾಸೋಹದಿಂದಾಗಿ ಅಂದಿನಿಂದಲೂ ಈ ನಾಡಿನಲ್ಲಿ ಪ್ರಸಿದ್ಧಿಯನ್ನು ಪಡೆದ ಮಠವಾಗಿದೆ.ಕೊಪ್ಪಳ ಗವಿಮಠವು ನಿಸರ್ಗ ಸಹಜ ಗವಿಗಳಿಂದ ನಿರ್ಮಾಣವಾಗಿರುವರಿಂದ “ಗವಿಮಠ” ಎಂದು ಪ್ರಸಿದ್ಧಿಯನ್ನು ಹೊಂದಿದೆ. ಸಂಸ್ಥಾನ ಗವಿಮಠ ಈಗಾಗಲೇ 18 ಪೀಠಾಧೀಶರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೆಚ್ಚಿನ ಮಾಹಿತಿ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಾಹಿತಿ

ಎಲ್ಲ ಭಕ್ತರ ಹೃದಯಾಳದಲ್ಲಿ ಸ್ಥಿರವಾಗಿ ನೆಲಿಸಿದ ಮಹಾಮಹಿಮ ಶ್ರೀಗವಿಸಿದ್ಧೇಶ್ವರರು, ಶ್ರೀಗವಿಮಠ ಪರಂಪರೆಯ 11ನೇ ಪೀಠಾಧೀಶರು, ತಮ್ಮ ಅವಧಿಯಲ್ಲಿ ಹಲವಾರು ಪವಾಡಗಳನ್ನು ಎಸಗಿ ಭಕ್ತರ ಉದ್ಧಾರ ಮಾಡಿದ ಮಹಾ ಪವಾಡ ಪುರುಷರು. ಹೈದ್ರಾಬಾದ ನವಾಬರು ಕುಷ್ಠ್ಟರೋಗದಿಂದ ಬಳಲುತ್ತಿದ್ದಾಗ ಶ್ರೀಗಳವರ ಆಶೀರ್ವಾದ ಹಾಗೂ ವೈದ್ಯಕೀಯ ಚಿಕಿತ್ಸೆ ಹೊಂದಿ ಶ್ರೀಗವಿಮಠಕ್ಕೆ ಜಹಗೀರ ನೀಡಿ ಗುರು ಕಾಣಿಕೆ ಸಲ್ಲಿಸಿದ್ದು ಉಲ್ಲೇಖನಿಯ. ಶ್ರೀಗವಿಸಿದ್ಧೇಶ್ವರರ ಗುರುಭಕ್ತಿ ಅನನ್ಯ. ತಮ್ಮ ಗುರುಗಳ ಅಗಲಿಕೆಯ ಅನುತಾಪವನ್ನು ಸಹಿಸದೇ ಗುರುಗಳ ಅಪ್ಪಣೆ ಪಡೆದು ಗುರುಗಳಿಗಾಗಿಯೇ ನಿರ್ಮಿಸಿದ ಸಮಾಧಿಯಲ್ಲಿ ನಿರ್ವಿಕಲ್ಪ ಸಮಾಧಿ ಹೊಂದಿದ ಮಹಾಮಹಿಮ ಶ್ರೀಗವಿಸಿದ್ಧೇಶ್ವರರು, ಸ್ವತ: ಅವರ ಗುರುಗಳಿಂದಲೇ ಪ್ರಾರಂಭವಾದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂದಿನಿಂದ ಇಂದಿನವರೆಗೂ ನಿರಂತರ ಸಾಗಿಬಂದಿದೆ. ಪ್ರತಿ ವರ್ಷ ಪುಷ್ಯ ಬ. ಬಿದಿಗಿಯಂದು ಜರುಗುವ ಈ ಮಹಾಶಿವಯೋಗಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವದು ತಮ್ಮ ಭಾಗ್ಯವೆಂದು, ಲಕ್ಷ ಲಕ್ಷ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಆಗಮಿಸಿ ಪೂಜ್ಯ ಶಿವಯೋಗಿಗಳ ಕೃಪೆಗೆ ಪಾತ್ರರಾಗುತ್ತಾರೆ. ಆಧ್ಯಾತ್ಮಿಕ, ಸಾಂಸ್ಕೃತಿಕ, ಸಂಗೀತ ಗೋಷ್ಠಿಗಳೊಂದಿಗೆ ಜಾತ್ರೆಯು ಒಂದು ತಿಂಗಳ ಪರ್ಯಂತವಾಗಿ ಜರುಗುವುದು.

Facebook Like and comments

ಸಂರ್ಪಕ ವಿಳಾಸ

ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ
Phno: +91 9880494419 / +91 9980899219
email: srigavimathkoppal@gmail.com

Your message has been sent. Thank you!